Wednesday, June 24, 2009

ಮುನ್ನುಡಿ

ಮನಸ್ಸು: ಭೂಮಿಯ ಹಾಗೆ. ಎಂದೂ, ಎಲ್ಲೂ ನಿಲ್ಲುವುದಿಲ್ಲ.

ಬದುಕಿನ ಕ್ಷಣ ಕ್ಷಣಗಳನ್ನೂ ಸೂಕ್ಷ್ಮವಾಗಿ ಗಮನಿಸುತ್ತದೆ;ಒಳಗೊಳಗೇ ಪ್ರತಿಕ್ರಿಯಿಸುತ್ತದೆ. ದೈನಂದಿನ ಬದುಕಿನ ವಿಪರ್ಯಾಸ, ಪರಸ್ಪರರ ಕೆಸರೆರೆಚಾಟ, ನಿಸರ್ಗದ ರಮಣೀಯತೆಯ ಮಾಟ, ಅಧುನಿಕ ತಂತ್ರಜ್ಞಾನದ ಅರ್ಭಟ, ರಾಜಕೀಯದ ಜಂಜಾಟ, ಹಳೆ ನೆನಪುಗಳ ಕಾಟ, ಮೌಲ್ಯಗಳ ಹುಡುಕಾಟ - ಹೀಗೆ ಹತ್ತು ವಿಷಯಗಳನ್ನು ಹೊತ್ತು, ಹೃದಯದ ಪ್ರತಿ ಬಡಿತಕ್ಕೂ ಸಂಗಾತಿಯಾಗಿ ಮಿಡಿಯುತ್ತದೆ.

ಅಂತರಂಗದ ಮೃದಂಗ: ಅಂತಹಾ ಒಂದು ಮನಸ್ಸಿನ ಭಾವ ತರಂಗಗಳ ನಿನಾದ.